ಸುಸ್ವಾಗತ
ಹೊಸಮಾರ್ಗ ಸಭೆಯು ವಿಭಿನ್ನ ಜನಾಂಗೀಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳ ಕನ್ನಡ ಭಾಷೆಯ ಕ್ರಿಸ್ತ ಅನುಯಾಯಿಗಳ ಸಮುದಾಯವಾಗಿದೆ.

ಈ ಸಭೆಗೆ ಎಲ್ಲರಿಗೂ ಸ್ವಾಗತ. ನಿಮ್ಮನ್ನು ಭೇಟಿಮಾಡಿ ನಿಮ್ಮ ಜೊತೆ ಅರ್ಥಪೂರ್ಣವಾದ ಸಂಬಂಧವನ್ನು ಹಂಚಿಕೊಳ್ಳಲು ಹೊಸ ಮಾರ್ಗದ ಸದಸ್ಯರು ಕುತೂಹಲದಿಂದ ಎದುರು ನೋಡುತ್ತೇವೆ.

ಪ್ರತಿ ಭಾನುವಾರ, ಪೂಜೆಗೆ ನಮ್ಮೊಂದಿಗೆ ಸೇರಿ
ಯೇಸು ಕ್ರಿಸ್ತನ ಬೋಧನೆಗಳನ್ನು ಪ್ರಸಂಗಿಸಿ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ನಗರದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಕ್ರಿಸ್ತ ಸಮುದಾಯವನ್ನು ನಿರ್ಮಿಸಲು ಉದ್ದೇಶವನ್ನು ಹೊಂದಿರುವ ಸುವಾರ್ತೆ ಕೇಂದ್ರೀಕೃತ, ಪಂಗಡ ಮುಕ್ತಸಭೆ ಹೊಸ ಮಾರ್ಗ ಸಭೆಯಾಗಿದೆ. ಸಭೆಯಲ್ಲಿ ಆರಾಧನೆ, ಸಣ್ಣ ಮತ್ತು ಮನೆ ಗುಂಪುಗಳನ್ನು ಕನ್ನಡದಲ್ಲಿ ನಡೆಸಲಾಗುತ್ತದೆ. ಸಭೆ ಮಕ್ಕಳು, ಯುವಕರು ಮತ್ತು ವಯಸ್ಕರ ಸ್ನೇಹಿಯಾಗಿದೆ.
ವಯೋಮಿತಿಯ ಸಣ್ಣ ಗುಂಪುಗಳನ್ನು ಭಾನುವಾರದಿಂದ ಭಾನುವಾರದವರೆಗೆ ನಡೆಸಲಾಗುತ್ತದೆ.
ನಮ್ಮ ಮಿಷನ್ ಮತ್ತು ಮೌಲ್ಯಗಳು
ಸುತ್ತಿಸು , ಪೋಷಿಸು, ಮತ್ತು ಸುವಾರ್ತಿಕರಣ ನಮ್ಮ ಮೂಲ ಮೌಲ್ಯಗಳು.
ಅಡ್ಡಗೋಡೆಗಳನ್ನು ಕೆಡುವುದು, ಕೃಪಾಭರಿತ ಸಂಘ, ರಾಜಿಯಾಗದೆ ಶಾಸ್ತ್ರೋಕ್ತವಾಗಿ ಇರುವುದು. ಹೊಸ ಸಭಾ ಉಪಕ್ರಮಗಳು.
ನಮ್ಮ ಸಭಾ ಪಾಲಕರು
ಕರ್ನಾಟಕದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ತಮ್ಮ 21 ನೇ ವಯಸ್ಸಿನಲ್ಲಿ ಯೇಸು ಕ್ರಿಸ್ತನ ಹಿಂಬಾಲಕರಾದರು. ಜಾಕ್ಸನ್ ಅವರು 14 ವರ್ಷ ಮೇಲ್ಪಟ್ಟು ಡೆಲ್ ಎಚ್ಪಿ ಐಟಿಸಿ ಇನ್ಫೋಟೆಕ್ ಅಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಬಗ್ಗೆ ದೇವರು ಅವರ ಹೃದಯದಲ್ಲಿ ಭಾರವನ್ನು ಹಾಕಿದಾಗ ಜಾಕ್ಸನ್ ತೀರ್ಮಾನಿಸಿದರು ತಮ್ಮ ಉಳಿದ ಜೀವಿತವನ್ನು ಕ್ರಿಸ್ತನ ಜೀವ ಮಾರ್ಪಡಿಸುವ ಸುವಾರ್ತೆಯನ್ನು ಸಾರುವುದರಲ್ಲಿ ಕಳೆಯುವೆ ಎಂದು. ಅಂದಿನಿಂದ ಅವರು ಸಭಾ ನೆಡುವ ಸೇವೆಯಲ್ಲಿ ನಿರತರಾಗಿದ್ದಾರೆ.
ಜಾಕ್ಸನ್ ಅವರು ಹೊಸಮಾರ್ಗ ಸಭೆಯ ನಾಯಕ ಸಭಾಪಾಲಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಆವರು ಸ್ಪಿರಿಚುಯಲ್ ಲೈಫ್ ಬೈಬಲ್ ಕಾಲೇಜಿನಿಂದ ದೈವಜ್ಞಾನ ಶಾಸ್ತ್ರದಲ್ಲಿ ಡಿಪ್ಲೋಮಾ ಮತ್ತು ಮದ್ರಾಸ್ ಮಹಾ ವಿಶ್ವವಿದ್ಯಾಲಯದಿಂದ ಕ್ರೈಸ್ತ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಜಾಕ್ಸನ್ ಮತ್ತು ಪತ್ನಿ ಅರುಣಾ ಅವರಿಗೆ ಅಭಿಗೆಲ್ ಮತ್ತು ಜೋಶುವ ಎಂಬ ಮಕ್ಕಳಿದ್ದಾರೆ. ಅವರನ್ನು ಈ ಮೇಲ್ ಮೂಲಕ ಸಂಪರ್ಕಿಸಬಹುದು.
